ಮಂದಲಗಿರಿ
	ಒಂದು ಬೆಟ್ಟ.  ಜೈನ ಕ್ಷೇತ್ರ.  ಇದು ಕರ್ನಾಟಕ ರಾಜ್ಯದ ತುಮಕೂರು ಬಳಿ ಇದೆ. ಬೆಟ್ಟದ ಮಧ್ಯಭಾಗದ ಬದಿಯಲ್ಲಿ ಬ್ರಹ್ಮದೇವರ ಗುಡಿ ಇದೆ.  ಬೆಟ್ಟದ ಮೇಲೆ ಪಾಶ್ರ್ವನಾಥ, ಚಂದ್ರನಾಥ, ಸುಪಾಶ್ರ್ವ ಹಾಗೂ ಚಂದ್ರಪ್ರಭ ಈ ತೀರ್ಥಂಕರರ ಜಿನಾಲಯಗಳಿವೆ.  ಇಲ್ಲಿರುವ ಬ್ರಹ್ಮತೀರ್ಥ ಹಾಗೂ ಗಣಧರರ ಪಾದುಕೆಗಳು ದರ್ಶನೀಯ.
(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ